ಬೆಂಗಳೂರು :ಅಖಿಲ ಭಾರತ ಕನ್ನಡ ಪತ್ರಿಕಾ ಸಮಾವೇಶ: ಸುಕುಮಾರ್ ಮುನಿಯಾಲ್‌ಗೆ "ಕರ್ನಾಟಕ ಜ್ಯೋತಿ ರಾಜ್ಯ" ಪ್ರಶಸ್ತಿ
ಬೆಂಗಳೂರು : ಪ್ರಜಾವಾಣಿಯ ವರದಿಗಾರ ಸುದ್ದಿಕಿರಣ ಪತ್ರಿಕೆಯ ಸಂಪಾದಕ ಸುಕುಮಾರ್ ಮುನಿಯಾಲ್ ಅವರಿಗೆ ಪುಸ್ತಕಮನೆ ಮಾಸಿಕದ ಸಂಪಾದಕ ಹರಿಹರಪ್ರಿಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಡಾ.ರಾಜ್ ಕುಮಾರ್ ಕಲಾಕ್ಷೇತ್ರದಲ್ಲಿ ನಡೆದ ನಾಲ್ಕುದಿನಗಳ ಅಖಿಲ ಭಾರತ ಕನ್ನಡ ಪತ್ರಿಕಾ ಸಮಾವೇಶದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿನ ಪತ್ರಿಕಾ ವಿಶೇಷ ಸಾಧನೆಗಾಗಿ ನೀಡುವ "ಕರ್ನಾಟಕ ಜ್ಯೋತಿ ರಾಜ್ಯ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಾಜಿ ಸಚಿವರಾದ ಶಶಿಕಾಂತ ಅಕ್ಕಪ್ಪ ನಾಯಕ ಮತ್ತು ಎಚ್.ಎಂ ರೇವಣ್ಣ ಅವರು ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದರು.ಚಿಪ್ಪಳ ಕಟ್ಟೆ ಬಾಳೆ ಹೊನ್ನೂರು ಶಾಖಾಮಠದ ಶ್ರೀ ಕಲ್ಮೇಶ್ವರ ಮಹಾಸ್ವಾಮಿಜಿ, ಶಾಸಕ ನೆ.ಲ.ನರೇಂದ್ರ ಬಾಬು,ಹಿರಿಯ ಚಿತ್ರ ನಟ ಬ್ಯಾಂಕ್ ಜನಾರ್ದನ್,ಪಂಪ ಪ್ರಶಸ್ತಿ ಪುರಸ್ಕೃತ ಚಂದ್ರ ಶೇಖರ್ ಪಾಟೀಲ್, ಸಾಹಿತಿ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸುರ್ವೆ ಪತ್ರಿಕೆಯ ಸಂಪಾದಕ ರಮೇಶ್ ಸುರ್ವೆ ಮೊದಲಾದವರು ಉಪಸ್ಥಿತರಿದ್ದರು.
ಸುಕುಮಾರ್ ಮುನಿಯಾಲ್ ಅವರಿಗೆ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ರಾಜೇಶ್ ಶಿಬಾಜೆ ಪ್ರಶಸ್ತಿ,ಚೈತನ್ಯ ಪುರಸ್ಕಾರ ಪ್ರಶಸ್ತಿ ಈಗಾಗಲೇ ಲಭಿಸಿದೆ. ಹಲವಾರು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರೀಯವಾಗಿ ಇವರು ತೊಡಗಿಸಿಕೊಂಡಿದ್ದಾರೆ. ಇವರು ಕಾರ್ಕಳ ತಾಲೂಕು ಶಿವಪುರ ಗ್ರಾಮದ ಖಜಾನೆ ಸುಲೋಚನಾ ಸುಂದರ ಆಚಾರ್ಯ ದಂಪತಿಗಳ ಪುತ್ರ.
ಇತ್ತೀಚೆಗೆ ನಿಧನರಾದ ಮಹಮ್ಮದ್ ಅವರಿಗೆ ಶೃಧ್ಧಾಂಜಲಿ ಸಭೆ
ಕೋಡಿ, ಕುಂದಾಪುರ : ಇತ್ತೀಚೆಗೆ ನಿಧನರಾದ ಬ್ಯಾರೀಸ್ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ ಯ ಅಧ್ಯಕ್ಷರಾಗಿದ್ದ ಮಹಮ್ಮದ್ ಅವರ ಶೃಧ್ಧಾಂಜಲಿ ಸಭೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು. ಆಡಳಿತ ನಿರ್ದೇಶಕಿ ಶ್ರೀಮತಿ ನಿಶಾ ಲಕ್ಷ್ಮಣ್ ಮಾತನಾಡಿ "ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಮಹಮ್ಮದ್ ಅವರ ಸಾವು, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ" ಎಂದರು. ಬ್ಯಾರೀಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಶೋಕ ವ್ಯಕ್ತಪಡಿಸಿ, "ಮೃತರು ಪರೋಪಕಾರಿ ಮನೋಭಾವದವರಾಗಿದ್ದರು" ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸಂಜೀವ, ಶ್ರೀ ಶಂಕರ್ ಪೂಜಾರಿ, ಶ್ರೀ ಭಾಸ್ಕರ್ ಪುತ್ರನ್, ನಾಗರಾಜ್ ಕಾಂಚನ್, ಸಂಸ್ಥೆಯ ಎಲ್ಲಾ ಪ್ರಾಂಶುಪಾಲರು, ಶಿಕ್ಷಕರು, ಉಪನ್ಯಾಸಕ ವೃಂದ ಹಾಗೂ ವಿದ್ಯಾಥಿಗಳು ಉಪಸ್ಥಿತರಿದ್ದರು.



del.icio.us
Digg
Comments (0 posted):
Post your comment