Home | ರಾಜ್ಯ ವಾರ್ತೆ | ಹುಬ್ಬಳ್ಳಿ | ರಾಯಚುರು: ಚುನಾವಣೆ- ಮದ್ಯ ಮಾರಾಟ ನಿಷೇಧ

ರಾಯಚುರು: ಚುನಾವಣೆ- ಮದ್ಯ ಮಾರಾಟ ನಿಷೇಧ

Font size: Decrease font Enlarge font
p, li { white-space: pre-wrap; }

 

ರಾಯಚುರು: ಚುನಾವಣೆ- ಮದ್ಯ ಮಾರಾಟ ನಿಷೇಧ

 

ರಾಯಚುರು:೨೪: ರಾಯಚುರು ಜಿಲ್ಲೆಯಲ್ಲಿ ಜರುಗುತ್ತಿರುವ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ ಚುನಾವಣೆಗಳಲ್ಲಿ ಶಾಚಿತಿ ಸುವ್ಯವಸ್ತೆ ಕಾಯ್ದುಕೊಂಡು ಬರಲು ಅನುಕೂಲವಾಗುವಂತೆ ಹಾಗು ವ್ಮತದಾನ ಮುಕ್ತ ಹಾಗು ಸುಗಮವಾಗಿ ನಡೆಯು‌ಉವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ೨೫-೧೨-೨೦೧೦ ರ ಬೆಳಿಗ್ಗೆ ೭-೦೦ ಗಂಟೆಯಿಂದ ೨೬-೧೨-೨೦೧೦ರ ವ್ಮದ್ಯರಾತ್ರಿಯವರೆಗೆ ರಾಯಚುರು ಜಿಲ್ಲೆಯಾದ್ಯಂತ ವ್ಮದ್ಯ ಮಾರಾಟ ನಿಷೇಧಿಸಿ ರಾಯಚುರು ಜಿಲ್ಲಾ ದಂಢಾದಿPರಿಗಳು ಹಾಗು ಜಿಲ್ಲಾಧಿಕಾರಿಗಳಾದ ಶ್ರೀ ವಿ ಅನ್ಬುಕುಮಾರ ಅವರು ಆದೇಶ ಹ್ರೆರಡಿಸಿದ್ದಾರೆ. ಈ ಅವಧಿಯಲ್ಲಿ ವ್ಮದ್ಯ ಮಾರಾಟದ ಎಲ್ಲ ಸಗಟು ಹಾಗು ರಿಟೆಲ್ ಅಂಗಡಿಗಳನ್ನು ಹಾಗು ಬ್ಭೆರೆ ಸ್ಥಳದಿಂದ ತಂಡು ಮಾರುವದನ್ನು ಸಂಪ್ರರ್ಣ ನಿಷೇಧಿಸಲಾಗಿದೆ. ಈ ಅವದಿಯಲ್ಲಿ ಎಲ್ಲ್ ಬಾರ ರೆಸ್ಟೋರೆಂಟಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಕಾನುನು ಉಲ್ಲಂಘಿಸುವವರ ವಿರುದ್ದ Pಠಿಣ ಕ್ರಮ ಜರುಗಿಸಲು ಅವರು ಆದೇಶಿಸಿದ್ದಾರೆ.

***

 

ಆರೋಗ್ಯ ಕುಟುಂಭ ಕಲ್ಯಾಣ ಸಚಿವರು ಗಿಲ್ಲೆಸಗೂರಿಗೆ

 

ರಾಯಚೂರು:೨೪ ಕರ್ನಾಟಕ ಸರಕಾರದ ಆರೋಗ್ಯ ಕುಟುಂಬ ಕಲ್ಯಾಣ ಸಚಿವರೂ ಹಾಗು ರಾಯಚುರು ಜಿಲ್ಲಾ ಉಸ್ತುವಾರಿ ಸಚಿವರು ೨೪-೧೨-೨೦೧೦ ರಂದು ಬೆಳಿಗ್ಗೆ ರಾಯಚುರು ತಾಲೂಕಿನ ಗಿಲ್ಲೆಸಗೂರು ಹೆಲಿಪ್ಯಾಡಿಗೆ, ನಂತರ ೧೨-೦೦ ಗಂಟೆಗೆ ಶಕ್ತಿನಗರ ಹೆಲಿಪ್ಯಾಡಿಗೆ ಮತ್ತು ಮದ್ಯಾಹ್ನ ೧-೩೦ ಕ್ಕೆ ದೇವದುರ್ಗ ತಾಲೂಕಿನ ಅರಕೇರಾ ಹೆಲಿಪ್ಯಾಡಿಗೆ ಆಗಮಿಸಿ ಅಲ್ಲಿಂದ ಸಂಜೆ ೪ ಗಂಟೆಗೆ ದೇವದುರ್ಗ ಹೆಲಿಪ್ಯಾಡಿಗೆ ಆಗಮಿಸಿ ಅಲ್ಲಿಂದ ಬಳ್ಳಾರಿಗೆ ತೆರಳಲಿದ್ದಾರೆ.

***

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

 

 

ಹಾವೇರಿಃಡಿ.೨೪: ಬೆಂಗಳೂರಿನ ಹೆಚ್.ಎ.ಎಲ್. ಸಂಸ್ಥೆ ಐ.ಟಿ.ಐ. ತೃರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹವಾನಿಸಿದೆ.

ಇಚ್ಛುಕರು ಅರ್ಜಿ ನಮೂನೆಯನ್ನು ಹಾವೇರಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ೧೦-೦೧-೨೦೧೧ರ ಸಂಜೆ ೫ ಘಂಟೆಯೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ’ಎ’ ಬ್ಲಾಕ್, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ ಇಲ್ಲಿಗೆ ಸಲ್ಲಿಸಬೇಕು.

 

ವಿದ್ಯಾರ್ಹತೆ - ಐ.ಟಿ.ಐ. - ಫಿಟರ್ ತರಬೇತಿಯಲ್ಲಿ ಶೇ. ೮೦ ರಷ್ಟು ಅಂಕ ಗಳಿಸಿದ ಸಾಮಾನ್ಯ ಅಭ್ಯರ್ಥಿಗಳು (ಪ.ಜಾ, ವರ್ಗಗಳಿಗೆ ಶೇ.೭೬, ಓಬಿಸಿ-ಶೇ. ೭೮), ಟರ್ನರ್ ಮತ್ತು ಮೆಕ್ಯಾನಿಕ್ (ಮೋಟರ್ ವೆಹಿಕಲ್) - ಶೇ. ೭೫, ಪ.ಜಾತಿ, ವರ್ಗ - ಶೇ.೭೦ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಶೇ. ೭೨), ಇಲೆಕ್ಟ್ರಿಶಿಯನ್ - ಸಾಮಾನ್ಯ ಅಭ್ಯರ್ಥಿ ಶೇ.೮೦, ಪ.ಜಾತಿ, ವರ್ಗ -ಶೇ.೭೫, ಓಬಿಸಿ - ಶೇ.೭೮, ಮೆಕ್ಯಾನಿಕ್ ಮತ್ತು ವೆಲ್ಡರ್ - ಸಾಮಾನ್ಯ ಶೇ. ೬೫, ಪ. ಜಾತಿ, ವರ್ಗ ಶೇ.೬೦, ಓಬಿಸಿ ಶೇ. ೬೨, ಶೀಟ್ ಮೆಟಲ್ ವರ್ಕರ್, ಫೌಂಡ್ರಿ ಮ್ಯಾನ್ ಮತ್ತು ಕಾರ್ಪೆಂಟರ್ - ಕನಿಷ್ಠ ಅಂಕಗಳೊಂದಿಗೆ ಪಾಸಾಗಿದ್ದರೆ ಸಾಕು. ಪಾಸಾ ಕಂಪ್ಯೂಟರ್ ತರಬೇತಿ (ಠಿಚಿssಚಿ ) ಪಾಸಾದ ಅಭ್ಯರ್ಥಿಗಳು ಪಿ.ಯು.ಸಿ. ವಿದ್ಯಾರ್ಹತೆ ಹೊಂದಿರಬೇಕು.

 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ, ಹಾವೇರಿ (ದೂರವಾಣಿ ಸಂಖ್ಯೆಃ ೦೮೩೭೫-೨೪೯೨೯೧) ಇವರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್. ರಾಜಮನಿ ಅವರು ತಿಳಿಸಿದ್ದಾರೆ.

 

 

 

ಹಾವೇರಿಯಲ್ಲಿ ’ಪರಿಸರ ದರ್ಶನ ’ ಕಾರ್ಯಕ್ರಮ

 

 

ಹಾವೇರಿಃಡಿ.೨೪: ಹಾವೇರಿಯ ಹೊಸಮಠದ ಶಾಲೆಯ ಆವರಣದಲ್ಲಿ ’ಪರಿಸರ ಜಾಗೃತಿ’ ಅಂಗವಾಗಿ ಇತ್ತೀಚೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶಾಲಾ ಮಕ್ಕಳಿಗೆ ಪರಿಸರ ದರ್ಶನ ಸಂಚಾರಿ ವಾಹನ ಪ್ರದರ್ಶನವನ್ನು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

 

ಈ ಕಾರ್ಯಕ್ರಮದ ಸಾನಿಧ್ಯವನ್ನು ಹಾವೇರಿಯ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ವಹಿಸಿ, ಗಿಡಗಳಿಗೆ ನೀರುಣಿಸುವುದರ ಮೂಲಕ ಪರಿಸರ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ, ಪರಿಸರ ಸಂರಕ್ಷಣೆಯಲ್ಲಿ ಯುವ ಜನರು ತೊಡಗಿಕೊಳ್ಳಬೇಕೆಂದು ಕರೆ ನೀಡಿದರು.

 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಶ್ರೀಮತಿ ಶೋಭಾ ಗಜಕೋಶ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ದರ್ಶನ ವಾಹನ ಸಾರುವ ಸಂದೇಶವನ್ನು ತಿಳಿದುಕೊಳ್ಳುವ ಮೂಲಕ ಶಾಲಾ ಮಕ್ಕಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

 

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ ಮಾಲಿನ್ಯ ಎಂದರೇನು ಎಂಬ ಕೈಪಿಡಿಯನ್ನು ಸ್ವಾಮಿಗಳು ಮತ್ತು ’ಅಮೃತವರ್ಷಿಣಿ’ ಎಂಬ ಮಳೆ ನೀರು ಕೊಯ್ಲಿನ ಕೈಪಿಡಿಯನ್ನು ಶ್ರೀಮತಿ ಶೋಭಾ ಗಜಕೋಶ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

 

ಈ ಕಾರ್ಯಕ್ರಮದಲ್ಲಿ ಆದರ್ಶ ಐ.ಟಿ.ಐ.ನ ಪ್ರಾಚಾರ್ಯ ಭಾಷಾ ಮಸೂತಿ, ಮಾಜಿ ಸೈನಿಕರಾದ ಚಂದ್ರಶೇಖರ ಶಿಸನಳ್ಳಿ, ಸೈನಿಕ ಐ.ಟಿ.ಐ. ನ ಪ್ರಾಚಾರ್ಯ ಶ್ರೀ ಶಿವಯೋಗಿ ಆರಾಧ್ಯಮಠ, ಮಾನಸ ಶಿಕ್ಷಣ ಸಂಸ್ಥೆಯ ಪದಾಧಿಕಾರಿ ಶ್ರೀ ಎ.ಎಂ. ಮುಜಾವರ, ಕಟಕೋಳ ಎಜ್ಯುಕೇಶನ್ ಟ್ರಸ್ಟಿನ ಪದಾಧಿಕಾರಿ ಶ್ರೀ ವಿ.ಎನ್. ಕುಲಕರ್ಣಿ, ಶಾನ್ ಎಜ್ಯುಕೇಶನ್ ಟ್ರಸ್ಟಿನ ಪದಾಧಿಕಾರಿ ಶ್ರೀ ಬಸವರಾಜ ದೊಡ್ಡಮನಿ, ಪರಿಸರ ಮತ್ತು ಸಾಂಸ್ಕೃತಿಕ ಜಾಗೃತಿ ವಾಹಿನಿ ಸಂಸ್ಥೆಯ ರಾಜ್ಯಾಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಮುಂದಿನಮನಿ, ಆಶಾಕಿರಣ ಸಂಸ್ಥೆಯ ಶ್ರೀ ಮುತ್ತುರಾಜ ಅವರು ಭಾಗವಹಿಸಿದ್ದರು.

 

 

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

 

ಬಳ್ಳಾರಿ, ಡಿ. ೨೪( ಕರ್ನಾಟಕ ವಾರ್ತೆ) ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಶ್ರೀ ಅಶೋಕ ಸದಲಗಿ ಹಾಗೂ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥ ಪಡಿಸಲಿದ್ದಾರೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಡಿಸೆಂಬರ್ ೨೭ರಂದು ಬಳ್ಳಾರಿ ಪ್ರವಾಸಿ ಮಂದಿರ, ೨೮ರಂದು ಸಂಡೂರು ಹಾಗೂ ಹೂವಿನಹಡಗಲಿ ಪ್ರವಾಸಿ ಮಂದಿರ, ೨೯ರಂದು ಸಿರುಗುಪ್ಪ ಹಾಗೂ ಕೂಡ್ಲಿಗಿ ಪ್ರವಾಸಿ ಮಂದಿರ, ೩೦ರಂದು ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರ ಹಾಗೂ ೩೧ರಂದು ಹೊಸಪೇಟೆ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೧-೩೦ರವರೆಗೆ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆ, ಕುಂದುಕೊರತೆ, ಅಹವಾಲು ಅರ್ಜಿಗಳನ್ನು ನಿಗದಿತ ದಿನಾಂಕದಂದು ಸಲ್ಲಿಸಿ ಬಗೆಹರಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

 

ಚುನಾವಣೆಃ ಮದ್ಯ ಮಾರಾಟ ನಿಷೇಧ

 

ಬಳ್ಳಾರಿ. ಡಿ. ೨೪ ( ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಡಿಸೆಂಬರ್ ೨೬ರಂದು ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ಆದೇಶ ಹೊರಡಿಸಿದ್ದಾರೆ.

 

ಡಿಸೆಂಬರ್ ೨೫ ರಂದು ಮಧ್ಯರಾತ್ರಿ ೧೨ ಗಂಟೆಯಿಂದ ೨೭ರ ಬೆಳಿಗ್ಗೆ ೬ ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರುತ್ತಿದೆ. ನಿಷೇಧಾವಧಿಯಲ್ಲಿ ಅಂಗಡಿಗಳು, ಷಾಪ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಯಾವುದೇ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.

 

ಭಕ್ತಾದಿಗಳು ಖಾಸಗಿ ಟ್ರಸ್ಟಿಗಳಿಗೆ ವಂತಿಗೆ ನೀಡದಿರಲು ಮನವಿ

 

ಬಳ್ಳಾರಿ, ಡಿ. ೨೪( ಕರ್ನಾಟಕ ವಾರ್ತೆ) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಹೂವಿನಹಡಗಲಿ ತಾಲೂಕಿನ ಮೊದಲಘಟ್ಟ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಭಕ್ತಾದಿಗಳು ಖಾಸಗಿ ವ್ಯಕ್ತಿ/ಸಂಸ್ಥೆ/ಟ್ರಸ್ಟಿಗಳಿಗೆ ವಂತಿಗೆ/ಹಣ ನೀಡಬಾರದೆಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಈ ದೇವಸ್ಥಾನಗಳ ಆಡಳಿತ ಹಾಗೂ ಹಣಕಾಸಿನ ವಿಚಾರದಲ್ಲಿ ಖಾಸಗಿ ರಿಜಿಸ್ಟರ್ಡ್ ಸಂಸ್ಥೆಗಳು/ಸಮಿತಿಗಳು ಯಾವುದೇ ರೀತಿಯ ಅಧಿಕಾರ ಹೊಂದಿರುವುದಿಲ್ಲ. ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಅನಧಿಕೃತ ವ್ಯಕ್ತಿಗಳು ಹಣ ವಸೂಲಿ ಮಾಡುವಂತಿಲ್ಲ. ಖಾಸಗಿ ಟ್ರಸ್ಟಿ/ಸಂಸ್ಥೆಗಳಿಗೆ ನೀಡಿದ ಹಣ ದೇವಾಲಯದ ನಿಧಿಗೆ ಸೇರುವುದಿಲ್ಲವಾದ್ದರಿಂದ ಭಕ್ತಾದಿಗಳು ತಮ್ಮ ದೇಣಿಗೆಯನ್ನು ದೇವಸ್ಥಾನದ ಆಡಳಿತ ಮಂಡಳಿಗೇ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

 

ವರದಕ್ಷಿಣೆ ಕಿರುಕುಳ: ಸಂಪತ್‌ಕುಮಾರ್‌ಗೆ ಶಿಕ್ಷೆ

 

ಬಳ್ಳಾರಿ, ಡಿ. ೨೪( ಕರ್ನಾಟಕ ವಾರ್ತೆ) ಒಂದನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯವು ವರದಕ್ಷಿಣೆ ಕಿರುಕುಳ ನೀಡಿದ ಸಂಡೂರು ತಾಲೂಕಿನ ಸಂಪತ್‌ಕುಮಾರ್ ಅವರಿಗೆ ೧ ವರ್ಷ ೯ ತಿಂಗಳ ಜೈಲು ಶಿಕ್ಷೆ ಹಾಗೂ ೧೨ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

 

ಸಂಪತ್‌ಕುಮಾರ್ ೨೦೦೨ರಲ್ಲಿ ಶ್ರೀಮತಿ ಸೌಭಾಗ್ಯ ಅವರನ್ನು ೨,೫೦,೦೦೦ ವರದಕ್ಷಿಣೆ ಪಡೆದು ಮದುವೆಯಾಗಿದ್ದು, ನಂತರ ತನ್ನ ಪತ್ನಿಗೆ ಇನ್ನೂ ೫೦೦೦೦ ಹೆಚ್ಚಿನ ವರದಕ್ಷಿಣೆಯನ್ನು ತರಬೇಕೆಂದು ಕಿರುಕುಳ ನೀಡಿರುವ ಆರೋಪವು ವಿಚಾರಣೆಯಿಂದ ರುಜುವಾತಾಗಿರುವುದರಿಂದ ಒಂದನೇ ಹೆಚ್ಚುವರಿ ಜೆ‌ಎಂಎಫ್‌ಸಿ ನ್ಯಾಯಾಧೀಶರಾದ ಶ್ರೀ ಎಂ.ಬಿ. ಕುಲಕರ್ಣಿ ಅವರು ಡಿಸೆಂಬರ್ ೨೩ರಂದು ಪ್ರಕರಣ ಇತ್ಯರ್ಥಗೊಳಿಸಿ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀ ಎಸ್.ಡಿ. ಕಮತೆ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

 

ನಾಲ್ಕು ಗ್ರಾಮಗಳಲ್ಲಿ ಸಂತೆ ನಿಷೇಧ

 

ಬಳ್ಳಾರಿ. ಡಿ. ೨೪ ( ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಡಿಸೆಂಬರ್ ೨೬ರಂದು ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೂಡ್ಲಿಗಿ ತಾಲೂಕಿನ ಗುಡೇಕೋಟೆ, ಬಣವಿಕಲ್ಲು, ಸೂಲದಹಳ್ಳಿ ಹಾಗೂ ತಾಯಕ್ಕನಹಳ್ಳಿ ಗ್ರಾಮಗಳಲ್ಲಿ ಡಿ.೨೬ರಂದು ಸಂತೆ ನಡೆಸದಂತೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ಆದೇಶ ಹೊರಡಿಸಿದ್ದಾರೆ.

 

ವಿದ್ಯುತ್ ಕಳ್ಳತನ : ೩ಸಾವಿರ ರೂ. ದಂಡ

 

ಬಳ್ಳಾರಿ, ಡಿ. ೨೪( ಕರ್ನಾಟಕ ವಾರ್ತೆ) ಮಾನ್ಯ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಬಿ.ಎಂ. ರಾಜು ಅವರು ವಿದ್ಯುತ್ ಕಳ್ಳತನ ಮಾಡಿದ ಸಂಡೂರು ತಾಲೂಕು ಚಿಕ್ಕ ಕೆರೆಯಾಗಿನಹಳ್ಳಿಯ ಪಿ. ಚಿನ್ನಪುರಪ್ಪನಿಗೆ ೩ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

 

ಚಿನ್ನಪುರಪ್ಪ ತನ್ನ ಹಿಟ್ಟಿನ ಗಿರಣಿಯಲ್ಲಿ ಅಳವಡಿಸಿರುವ ವಿದ್ಯುತ್ ಮೀಟರ್ ಅನ್ನು ಟ್ಯಾಪ್ ಮಾಡಿ ೧೦ ಹೆಚ್.ಸಿ.ನಷ್ಟು ವಿದ್ಯುತ್ ಬಳಸಿರುವುದು ರುಜುವಾತಾಗಿದೆ. ಇದರಿಂದ ವಿದ್ಯುತ್ ಕಂಪನಿಗೆ ೪೨೦೪ ಯುನಿಟ್ಸ್ ವಿದ್ಯುತ್ ಸೋರಿಕೆಯಾಗಿ ೫೦೯೮೪ ರೂ.ಗಳ ನಷ್ಟವುಂಟಾಗಿದೆ. ಅಪರ ಸರ್ಕಾರಿ ಅಭಿಯೋಜಕ ಶ್ರೀ ಆರ್.ಎಲ್. ರಾಥೋಡ್ ಅವರು ಈ ಪ್ರಕರಣದಲ್ಲಿ ಮಂಡಿಸಿದ ವಾದದಿಂದ ಚಿನ್ನಪುರಪ್ಪನ ಮೇಲಿನ ಅಪರಾಧ ಸಾಬೀತಾಗಿರುವುದರಿಂದ ಈ ತೀರ್ಪು ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಏರ್‌ಮೆನ್ ರ್‍ಯಾಲಿ-೨೦೧೧:

 

ಉಚಿತ ಪರೀಕ್ಷಾಪೂರ್ವ ತರಬೇತಿಗೆ ಆಹ್ವಾನ

 

ಶಿವಮೊಗ್ಗ, ಡಿಸೆಂಬರ್ ೨೪(ಕರ್ನಾಟಕ ವಾರ್ತೆ)- ಜನವರಿ ೨೦೧೧ರಲ್ಲಿ, ನಗರದ ನೆಹರೂ ಕ್ರೀಡಾಂಗಣದಲ್ಲಿ ತಾಂತ್ರಿಕ ಹಾಗೂ ತಾಂತ್ರಿಕೇತರ ಏರ್‌ಮೆನ್ ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಪೂರ್ವಸಿದ್ಧತೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯು ೨೦ ದಿನಗಳ ವಿಶೇಷ ತರಬೇತಿ ನೀಡಲಿದೆ.

 

ತರಬೇತಿಯು ಡಿಸೆಂಬರ್ ೨೭ರಂದು ಮಧ್ಯಾಹ್ನ ೩ ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಗಣಿತ, ಭೌತಶಾಸ್ತ್ರ, ಆಂಗ್ಲ ಭಾಷೆ ಹಾಗೂ ಸಾಮಾನ್ಯ ಜ್ಞಾನ ವಿಷಯಗಳನ್ನು ಒಳಗೊಂಡಿರುತ್ತದೆ. ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಅರ್ಹರಾದ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ನಗರದ ಸವಳಂಗ ರಸ್ತೆಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ನಡೆಯುವ ಈ ತರಬೇತಿಯನ್ನು ಜಿಲ್ಲೆಯ ನುರಿತ ವಿಷಯ ತಜ್ಞರಿಂದ ನೀಡಲಾಗುವುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಶ್ರೀಮತಿ ತನುಜ ರಾಂಪುರೆ ತಿಳಿಸಿದ್ದಾರೆ.

 

ತರಬೇತಿ ಹಾಗೂ ರ್‍ಯಾಲಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ೦೮೧೮೨-೨೨೨೨೯೩, ೯೯೮೦೧೮೪೨೬೭, ೯೪೪೯೯೬೮೫೪೫ ನ್ನು ಸಂಪರ್ಕಿಸಬಹುದಾಗಿದೆ.

 

ಜನವರಿ ೭ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷೆಗಳು

 

ಶಿವಮೊಗ್ಗ, ಡಿಸೆಂಬರ್ ೨೪(ಕರ್ನಾಟಕ ವಾರ್ತೆ)-ಕನ್ನಡ ಸಾಹಿತ್ಯ ಪರಿಷತ್ತಿನ ೨೦೧೦-೧೧ನೇ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ಜನವರಿ ೭ರಿಂದ ೯ರವರೆಗೆ ರಾಜ್ಯದ ೨೦ ಕೇಂದ್ರಗಳಲ್ಲಿ ನಡೆಯಲಿವೆ.

 

ಪರೀಕ್ಷಾ ಪ್ರವೇಶ ಪತ್ರಗಳನ್ನು ವಿರ್ಧಯಾರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಡಿಸೆಂಬರ್ ೩೧ರ ನಂತರವೂ ಪ್ರವೇಶ ಪತ್ರ ತಲುಪದಿರುವ ಬಗ್ಗೆ ವಿಧ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮ ಇಲ್ಲಿ ವಿಚಾರಿಸಬಹುದಾಗಿದೆ. ಇತರೆ ಜಿಲ್ಲೆಯ ವಿಧ್ಯಾರ್ಥಿಗಳು ಪ್ರವೇಶ ಪತ್ರ ತಲುಪದಿದ್ದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು. ಪರೀಕ್ಷಾ ಕೇಂದ್ರದ ಮಾಹಿತಿಯನ್ನು ದೂರವಾಣಿ ೦೮೦-೨೬೬೨೩೮೪ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಜ.೪ರಿಂದ ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ ಹಾಗೂ ತೆಪ್ಪೋತ್ಸವ ನಂ:೧೧೩

 

ಶಿವಮೊಗ್ಗ, ಡಿಸೆಂಬರ್ ೨೪(ಕರ್ನಾಟಕ ವಾರ್ತೆ)- ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಜನವರಿ ೪ರಿಂದ ೬ರವರೆಗೆ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಹಾಗೂ ತೆಪ್ಪೋತ್ಸವ ನಡೆಯಲಿದೆ.

 

ಜನವರಿ ೪ರಂದು ತೀರ್ಥಸ್ನಾನ, ೫ರಂದು ಮಹಾಪೂಜೆ, ಕಲಾಭಿಷೇಕ ಹಾಗೂ ಮಹಾರಥೋತ್ಸವ ನಡೆಯಲಿದ್ದು, ಜನವರಿ ೬ರಂದು ಮಹಾಪೂಜೆ ಅವಬೃತ ಸ್ನಾನ ಹಾಗೂ ಉತ್ಸವದ ನಂತರ ಅಂದು ಸಂಜೆ ೭ ಗಂಟೆಗೆ ತೆಪ್ಪೋತ್ಸವ ಹಾಗೂ ತುಂಗಾ ನದಿ ದಡದಲ್ಲಿ ಬಿರುಸು ಬಾಣ ಪ್ರದರ್ಶನವನ್ನು ನಡೆಸಲಾಘುವುದು ಎಂದು ತೀರ್ಥಹಳ್ಳಿಯ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಕೆ.ಎಸ್.ಓ.ಯು. ಮೈಸೂರು: ದೂರಶಿಕ್ಷಣ ಪ್ರವೇಶಾತಿ ಅವಧಿ ವಿಸ್ತರಣೆ

 

ಶಿವಮೊಗ್ಗ, ಡಿಸೆಂಬರ್ ೨೪ (ಕರ್ನಾಟಕ ವಾರ್ತೆ)- ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶಿವಮೊಗ್ಗ ಪ್ರಾದೇಶಿಕ ಕೇಂದ್ರದ ವತಿಯಿಂದ ೨೦೧೦-೧೧ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಹಾಗೂ ವಿವರಣಾ ಪುಸ್ತಕಗಳ ವಿತರಣೆಯನ್ನು ಡಿಸೆಂಬರ್ ೩೧ರವರೆಗೆ ವಿಸ್ತರಿಸಲಾಗಿದ್ದು, ರೂ.೪೦೦/-ರ ದಂಡ ಶುಲ್ಕದೊಂದಿಗೆ ಬಿ.ಎ, ಬಿ.ಕಾಂ ಹಾಗೂ ಎಂ.ಎ, ಎಂ.ಕಾಂ ಪದವಿಗಳಿಗೆ ಪ್ರವೇಶಾತಿ ಪಡೆಯಬಹುದಾಗಿದೆ.

 

ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಬಿ.ಎ, ಬಿ.ಕಾಂ ಪದವಿಗೆ ಮುಕ್ತ ಅವಕಾಶವಿರುತ್ತದೆ. ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ ಭೋಧನಾ ಶುಲ್ಕದಲ್ಲಿ ಶೇ. ೨೫ರಷ್ಟು ರಿಯಾಯಿತಿ ಇರುತ್ತದೆ ಎಂದು ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ: ಪಿ. ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಪ್ರದೇಶಿಕ ಕೇಂದ್ರ, ಎಸ್.ಪಿ.ಎಂ. ರಸ್ತೆ, ಹಿಂದಿ ಶಿಕ್ಷಕ್ ತರಬೇತಿ ಕಾಲೇಜು, ಶಿವಮೊಗ್ಗ, ದೂರವಾಣಿ ಸಂಖ್ಯೆ: ೯೮೪೪೧ ೪೫೨೩೪, ೮೦೯೫೬೧೫೯೦೦, ೯೫೯೦೫೩೫೭೧೩ನ್ನು ಸಂಪರ್ಕಿಸಲು ತಿಳಿಸಿದೆ.

 

 

 

ಕೆ.ಎಸ್.ಓ.ಯು. ಮೈಸೂರು: ಪರೀಕ್ಷಾ ದಿನ ಹಾಗೂ ಸ್ಥಳ ಬದಲಾವಣೆ ನಂ: ೧೧೫

 

ಶಿವಮೊಗ್ಗ, ಡಿಸೆಂಬರ್ ೨೪ (ಕರ್ನಾಟಕ ವಾರ್ತೆ)- ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಎಂಬಿ‌ಎ ೨ನೇ ಹಾಗೂ ೪ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಿದ್ದ ಧಾರವಾಡದ ಜೆ‌ಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ವಿದ್ಯಾಗಿರಿ ಯನ್ನು ಕಾರಣಾಂತರಗಳಿಂದ ಕರ್ನಾಟಕ ವಿಶ್ವವಿದ್ಯಾನಿಲಯ, ಪಬ್ಲಿಕ್ ಸ್ಕೂಲ್, ಕಾಲೇಜ್ ರಸ್ತೆ, ಧಾರವಾಡ ಇಲ್ಲಿಗೆ ಬದಲಾಯಿಸಲಾಗಿದೆ.

 

ಧಾರವಾಡವನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿರುವ ವಿಧ್ಯಾರ್ಥಿಗಳು ಈ ಕಾಲೇಜಿನಲ್ಲಿ ತಮ್ಮ ಪ್ರವೇಶ ಪತ್ರಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಜನವರಿ ೪ರಂದು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ಮತೆಣಿಕೆ ಕಾರ್ಯ ಇರುವುದರಿಂದ ಅಂದು ನಡೆಯಬೇಕಿದ್ದ ಪರೀಕ್ಷೆಯನ್ನು ಜ.೧೬ರಂದು ಹಾಗೂ ೧೫ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮಕರ ಸಂಕ್ರಾಂತಿ ಪ್ರಯುಕ್ತ ಜ.೧೪ರಂದು ನಡೆಸಲಾಗವುದು ಎಂದು ಕೆ.ಎಸ್.ಓ.ಯು ನ ಶಿವಮೊಗ್ಗ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ

 ಡಾ: ಪಿ. ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂ: ೦೮೨೧-೨೫೧೯೯೪೨, ೨೫೧೯೯೪೩ ಹಾಗೂ ವೆಬ್‌ಸೈಟ್ ತಿತಿತಿ.ಞsoumಥಿsoಡಿe.eಜu.iಟಿ ನ್ನು ಸಂಪರ್ಕಿಸಲು ಕೋರಿದೆ.

 

 

ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅವಧಿ ವಿಸ್ತರಣೆ

 

ಶಿವಮೊಗ್ಗ, ಡಿಸೆಂಬರ್ ೨೪(ಕರ್ನಾಟಕ ವಾರ್ತೆ)- ಶಿವಮೊಗ್ಗ ಜಿಲ್ಲಾ ಕೇಂದ್ರಸ್ಥಾನದಲ್ಲಿ ಹೊಸದಾಗಿ ಮಂಜೂರಾಗಿರುವ ಮೆಟ್ರಿಕ್ ನಂತರದ ಮಾದರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆಯಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

 

ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಶೇ.೫೦ ರಷ್ಟು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೇ.೨೦, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ.೧೦ ರಷ್ಟು, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಶೇ.೧೦ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.೧೦ ರಷ್ಟು ಮೀಸಲಾತಿಯಂತೆ ಅಭ್ಯರ್ಥಿಗಳನ್ನು ವಿದ್ಯಾರ್ಥಿ ನಿಲಯಕ್ಕೆ ಆಯ್ಕೆ ಮಾಡಲಾಗುವುದು.

 

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ, ನಂ.೪೧೫, ಬಸವಚೇತನ ೧೦೦ ಅಡಿ ರಸ್ತೆ, ರವೀಂದ್ರ ನಗರ, ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ ೩೧ ರೊಳಗಾಗಿ ಸದರಿ ಕಚೇರಿಗೆ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಗ್ರಾಹಕರು ಜಾಗ್ರತರಾದರೆ ವಂಚನೆಗೆ ಕಡಿವಾಣ ಸಾಧ್ಯ

 

 

ಹುಬ್ಬಳಿ (ಕರ್ನಾಟಕ ವಾರ್ತೆ) ಡಿ.೨೪ : ಮನಸ್ಸು ಮತ್ತು ನಡತೆ ಸರಿಯಾಗಿದ್ದರೆ ಗ್ರಾಹಕ ಹಾಗೂ ವರ್ತಕರ ನಡುವೆ ಭಿನ್ನತೆ ಇರದು ಎಂದು ಧಾರವಾಡ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಶ್ರೀ ಶೇಖರಗೌಡ ಪಾಟೀಲ ನುಡಿದರು.

 

ನಗರದ ಜಗದ್ಗುರು ಗಂಗಾಧರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ಏರ್ಪಡಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ” ಉದ್ಛಾಟಿಸಿ ಅವರು ಮಾತನಾಡುತ್ತಿದ್ದರು. ಗ್ರಾಹಕರಾದವರು ತಮ್ಮ ಹಕ್ಕು ಹಾಗೂ ಜವಾಬ್ದಾರಿಗಳನ್ನು ಅರಿತುಕೊಂಡಲ್ಲಿ ವಂಚನೆ ತಡೆಗಟ್ಟಲು ಸಾದ್ಯವಾಗುತ್ತದೆ. ಆಸೆ , ಹೋಲಿಕೆ ಹಾಗೂ ಅಧಿಕಾರ ಇವುಗಳು ಮೋಸ - ವಂಚನೆಗಳಿಗೆ ದಾರಿ ಮಾಡಿಕೊಡುತ್ತವೆ. ಈ ಬಗ್ಗೆ ಪ್ರತಿಯೊಬ್ಬರು ಜಾಗರೂಕರಾಗಿದ್ದು , ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸನ್ನಡತೆಯ ಬದುಕು ರೂಪಿಸಿಕೊಂಡಲ್ಲಿ ಅಸಮತೋಲನ ನೀಗುವದಲ್ಲದೇ ಗ್ರಾಹಕರ ಶೋಷಣೆ ತಪ್ಪುವದಾಗಿ ಶ್ರೀ ಶೇಖರಗೌಡ ಅವರು ಅಬಿಪ್ರಾಯ ಪಟ್ಟರು.

 

ಕೊಳ್ಳುಬಾಕತನದಿಂದಾಗಿ ಗ್ರಾಹಕರು ಈಗ ಸರಕುಗಳ ಬಗ್ಗೆ ಇರುವ ಜಾಹೀರಾತು ಅಥವಾ ಅದರ ಮೇಲು ಹೊದಿಕೆಗೆ ಮಾರು ಹೋಗಿ , ಅದರಲ್ಲಿರುವ ಸಾಮಗ್ರಿಯ ಒಳ ತಿರುಳಿನ ಬಗ್ಗೆ ಗಮನ ಹರಿಸುವದಿಲ್ಲ. ಇದರಿಂದಾಗಿ ಗ್ರಾಹಕರು ತಮಗರಿವಿಲ್ಲದಂತೆ ತೊಂದರೆಗಿಡಾಗುವದನ್ನು ನಿದರ್ಶನಗಳೊಂದಿಗೆ ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಶ್ರೀ ಬಸವಪ್ರಭು ಹೊಸಕೇರಿ ವಿವರಿಸಿದರು. ಕುರುಕಲು ತಿಂಡಿ , ಪಾನೀಯ, ಶೃಂಗರಿಸಿದ ಖಾದ್ಯ ಪದಾರ್ಥಗಳು ಅರೋಗ್ಯಕ್ಕೆ ಹಾನಿಕರವಾಗಿರುವದರಿಂದ ಅದನ್ನು ಯಥೇಚ್ಛವಾಗಿ ಬಳಕೆ ಮಾಡುವ ವಿದ್ಯಾರ್ಥಿ ಗ್ರಾಹಕರು ಎಚ್ಚರಿಕೆಯಿಂದಿರಲು ಸಲಹೆ ಮಾಡಿದರು. ಎಸ್. ಎಂ. ಎಸ್ ಮೂಲಕ ಅಶ್ಲೀಲ ಸಂದೇಶ ರವಾನೆ , ಬೇಡಿಕೆ ಇಲ್ಲದ ವಾಣಿಜ್ಯ ಸಂದೇಶಗಳ ವಿರುದ್ಧ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಲು ಅವಕಾಶವಿದೆ. ಗ್ರಾಹಕರ ವೇದಿಕೆಯಿಂದ ರೈತರು ಬೆಳೆ ವಿಮೆ ಪರಿಹಾರ ಪಡೆದಿರುವದನ್ನು ಉದಾಹರಿಸಿದ ಅವರು ಅಧುನಿಕ ಸೇವೆಗಳ ಬಗ್ಗೆ ಹಾಗೂ ಜಾಹೀರಾತುಗಳು ಬಗ್ಗೆ ಬಳಕೆದಾರರು ಸಂಪೂರ್ಣ ಅಧ್ಯಯನ ಮಾಡಿ ಅದರ ಉಪಯೋಗಕ್ಕೆ ಮುಂದಾಗುವಂತೆ ಸೂಚಿಸಿದರು.ಹುಬ್ಬಳ್ಳಿಯ ಗ್ರಾಹಕರ ರಕ್ಷಣೆ ಮತ್ತು ಸಂಶೋಧನಾ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ಡಿ. ಎನ್. ಶಾನಭಾಗ ಮಾತನಾಡಿ ಗ್ರಾಹಕ ರಕ್ಷಣಾ ಕಾಯ್ದೆಯ ರಜತ ಮಹೋತ್ಸವದ ಈ ಸಂದರ್ಭದಲ್ಲಿ ಗ್ರಾಹಕರು ಜಾಗ್ರರತರಾಗಿ ತಮ್ಮ ಶೋಷಣೆ ತಪ್ಪಿಸಿಕೊಳ್ಳಲು ಮನವಿ ಮಾಡಿದರು. ಕಡಿಮೆ ತೂಕ ,ಕಲಬೆರಕೆ ಬಗ್ಗೆ ಬಳಕೆದಾರರು ತಮ್ಮ ಜವಾಬ್ದಾರಿ ಅರಿತು ನಿರಂತರವಾಗಿ ಗಮನ ಹರಿಸುವಂತೆ ಸೂಚಿಸಿದರು. ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಶ್ರೀ ಎಸ್. ಎಲ್. ಮಟ್ಟಿ ಮಾತನಾಡಿ ಗ್ರಾಹಕರ ಹಿತರಕ್ಷಣೆ ಕಾಯ್ದೆ ಬಳಕೆದಾರರಿಗೆ ದೊಡ್ಡ ಶಕ್ತಿ ನೀಡಿದ್ದು ಈ ಬಗ್ಗೆ ಅರಿತುಕೊಂಡು ಜಾಗೃತರಾಗಿರಲು ಕರೆ ನೀಡಿದರು.

 

 

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ಶ್ರೀ ಜ.ಗಂ.ಪ.ಪೂ.ಮಹಾವಿದ್ಯಾಲಯ ಮತ್ತು ಸ್ಪಂದನ ಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ ಈ ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದಿನಾಚರಣೆ ಅಂಗವಾಗಿ ಹೊರ ತಂದ ಗ್ರಾಹಕ ಮಾಹಿತಿಯ ಹೊತ್ತಿಗೆಯನ್ನು ಎಸ್. ಜೆ. ಎಂ. ವಿ ಸಂಘದ ಗೌರವ ಕಾರ್ಯದರ್ಶಿ ಶ್ರೀ ಹನುಮಂತ ಶಿಗ್ಗಾಂವಿ ಬಿಡುಗಡೆ ಮಾಡಿದರು. ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಶ್ರೀ ಜಗದೀಶ ಬೇವೂರ ತೂಕ ಮತ್ತು ಅಳತೆಯ ಮಹತ್ವ ಕುರಿತು ಮಾತನಾಡಿದರು. ಬಿಪಿಸಿ ಕಂಪನಿಯ ಅಡಿಗೆ ಅನಿಲ ವಿತರಕ ಶ್ರೀ ಅನಿಲ ದೇಸಾಯಿಯವರು ಎಲ್.ಪಿ. ಜಿ ಉಪಯೋಗ ಮತ್ತು ಸುರಕ್ಷತೆಯ ಬಗ್ಗೆ ಪ್ರದರ್ಶಿಕೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಮಾಡಿದರು. ಸ್ಪಂದನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸರೋಜಿನ ಚವಲಾರ್ ಮಾತನಾಡಿ ಪ್ರತಿಯೊಂದು ಪ್ರೌಢಶಾಲೆಯಲ್ಲಿ ಗ್ರಾಹಕರ ಕ್ಲಬ್‌ಗಳು ರಚನೆಯಾಗಬೇಕೆಂದರು.

 

 

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸ್ಪಂದನ ಸಂಸ್ಥೆ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ನಿಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ವಿಜೇತ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳಾದ ಕುಮಾರ ಅಣ್ಣಪ್ಪ ಮಾನೆ ಮತ್ತು ಕುಮಾರಿ ಶ್ವೇತಾ ತ್ಯಾಪಿ ಗ್ರಾಹಕರ ಹಕ್ಕುಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿದೇಶಕ ಶ್ರೀ ವಿನೋದಕುಮಾರ ಹೆಗ್ಗಳಿಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಆರಂಭದಲ್ಲಿ ಆಹಾರ ನಿರೀಕ್ಷಕ ನಾಗರಾಜ ಬನವಾಸಿ ಸ್ವಾಗತಿಸಿದರು. ಕೊನೆಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರರು ಶ್ರೀ ಬಿ. ಎಂ. ಸಾಲಿಮಠ ವಂದಿಸಿದರು. ಕನ್ನಡ ಉಪನ್ಯಾಸಕ ಶ್ರೀ ಜಿ. ಬಿ ಭದ್ರಾಪೂರ ಕಾರ್ಯಕ್ರಮ ನಿರೂಪಿಸಿದರು.

 

ಡಿ.೨೫ರಂದು ರಕ್ತದಾನ ಶಿಬಿರ

 

ಜೀವಧಾರೆ ಸ್ವಯಂ ಪ್ರೇರಿತ ರಕ್ತದಾನಿಗಳ ಟ್ರಸ್ಟ್, ಮಂಡ್ಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯ ನಗರದಲ್ಲಿರುವ ಚಿಂತನ ಟ್ರಸ್ಟ್ ಕಚೇರಿಯಲ್ಲಿ ಡಿಸೆಂಬರ್ ೨೫ರಂದು ಬೆಳಿಗ್ಗೆ ೧೦ ಗಂಟೆಗೆ ರಕ್ತ ದಾನ ಶಿಬಿರ ಆಯೋಜಿಸಲಾಗಿದೆ.

ಆದರ್ಶ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಶಸ್ತ್ರ ಚಿಕಿತ್ಸಕ ಡಾ| ಮೂರ್ತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಡ್ಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಮೀರಾ

ಶಿವಲಿಂಗಯ್ಯ ಅವರು ಅಧ್ಯಕ್ಷತೆ ವಹಿಸುವರು.

 

ಜ.೧೦ರಂದು ಮಾಜಿ ಯೋಧರ ಅವಲಂಬಿತರ ಆಯ್ಕೆ

 

ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ & ಸೆಂಟರ್, ಬೆಂಗಳೂರು, ಇವರಿಂದ ಯುನಿಟ್ ಹೆಡ್ ಕ್ವಾರ್ಟರ್‍ಸ್ ಕೋಟಾ ಅಡಿಯಲ್ಲಿ ಯುದ್ಧ / ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಮಕ್ಕಳು, ಸೈನ್ಯ ಸೇವೆಯಲ್ಲಿರುವ / ಮಾಜಿ ಸೈನಿಕರ ಅವಲಂಬಿತ ಮಕ್ಕಳು ಮತ್ತು ಸ್ವಂತ ತಮ್ಮಂದಿರನ್ನು ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ತಾಂತ್ರಿಕ ಮತ್ತು ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗಳಿಗಾಗಿ ದಿನಾಂಕ ೧೦-೦೧-೨೦೧೧ ರಂದು ಟ್ರೈನಿಂಗ್ ಬೆಟಾಲಿಯನ್-೩, ಪಿ.ಟಿ. ಗ್ರೌಂಡ್, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ & ಸೆಂಟರ್, ಬೆಂಗಳೂರು-೪೨ ಇಲ್ಲಿ ಆಯ್ಕೆ ಮಾಡಲಾಗುತ್ತದೆ.

 

ಅರ್ಹತೆ: ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ೪೫% ಅಂಕದೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ, ಸೋಲ್ಜರ್ ತಾಂತ್ರಿಕ ಹುದ್ದೆಗೆ ಪಿಯುಸಿ/ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ತೇರ್ಗಡೆ ಮತ್ತು ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗೆ ೮ನೇ ತರಗತಿಯಲ್ಲಿ ತೇರ್ಗಡೆ,

 

ವಯಸ್ಸು: ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಹದಿನೇಳೂವರೆ ಇಂದ ೨೧ ವರ್ಷ. ಸೋಲ್ಜರ್ ತಾಂತ್ರಿಕ ಮತ್ತು ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗೆ ಹದಿನೇಳೂವರೆ ಇಂದ ೨೩ ವರ್ಷ.

ಅಂಕಪಟ್ಟಿ, ಸ್ಥಳ ದೃಢೀಕರಣ, ಜಾತಿ ದೃಢೀಕರಣ, ನಡವಳಿಕೆ ಪತ್ರ, ರೆಕಾರ್ಡ್ಸ್‌ನಿಂದ ಪಡೆದ ಸಂಬಂಧ ದೃಢೀಕರಣ ಪತ್ರ, ಅವಿವಾಹಿತ ಪ್ರಮಾಣ ಪತ್ರ ಮತ್ತು ಎನ್‌ಸಿಸಿ ಸರ್ಟಿಫಿಕೇಟ್‌ಗಳಿದ್ದಲ್ಲಿ ಅವುಗಳ ಮೂಲ ಮತ್ತು ಎರಡೆರಡು ಜೆರಾಕ್ಸ್ ಪ್ರತಿಗಳೊಂದಿಗೆ ತಮ್ಮ ಇತ್ತೀಚಿನ ೧೫ ಭಾವಚಿತ್ರಗಳೊಂದಿಗೆ ದಿನಾಂಕ ೧೦-೦೧-೨೦೧೧ ರಂದು ಕೇಂದ್ರೀಯ ವಿದ್ಯಾಲಯ, ಎಂಇಜಿ ಸ್ಟೇಡಿಯಂ, ಟಿ‌ಒಸಿ ಎದುರು, ಬೆಂಗಳೂರು-೪೨ ಇಲ್ಲಿ ಬೆಳಿಗ್ಗೆ ೫.೩೦ ಕ್ಕೆ ಹಾಜರಿರಲು ಸೂಚಿಸಿದೆ. ಹೆಚ್ಚಿನ ಮಾಹಿತಿಯನ್ನು ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ಇವರಿಂದ ಪಡೆಯಬಹುದು.

 

ಕೀಲಾರದಲ್ಲಿ ಅಪರಾಧ ತಡೆ ಮಾಸಾಚರಣೆ

 

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಅಪರಾಧವನ್ನು ತಡೆಯಲು ಪೊಲೀಸ್ ಇಲಾಖೆಯೊಡನೆ ಸಹಕರಿಸಬೇಕೆಂದು ಕೆರಗೋಡು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಿವರಾಜ್ ಅವರು ಮನವಿ ಮಾಡಿದರು.

 

ಕೀಲಾರದ ಕ್ಷೀರಸಾಗರ ಮಿತ್ರಕೂಟ, ಭಾರತ ಸ್ಕೌಟ್ಸ್ ಮತ್ತು ಗೌಡ್ಸ್, ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಕೀಲಾರದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ಳ್ಳತನ ಹಾಗೂ ಅಪರಾಧಗಳು ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತದೆ. ನಗರದ ನಾಗರಿಕರು ನೆರೆಹೊರೆಯವರೊಂದಿಗೆ ಸಂಪರ್ಕ ಇಟ್ಟುಕೊಳ್ಳದಿರುವುದು ಕೂಡ ಕಳ್ಳತನಕ್ಕೆ ಕಾರಣವಾಗುತ್ತದೆ. ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಲಿಂಡರ್‌ಗಳು ಕೂಡ ಕಳವಾಗುತ್ತಿವೆ. ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

 

ಕೆ.ಜಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಕೀಲಾರ ಕೃಷ್ಣೇಗೌಡ ಸ್ವಾಗತಿಸಿದರು. ಸಾಮ್ಯುಯಲ್ ಸತ್ಯಕೂಟೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

 

ಅಬಕಾರಿ ಅಕ್ರಮ: ೫ ಮೊಕದ್ದಮೆ ದಾಖಲು, ಓರ್ವನ ಬಂಧನ

 

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ, ೫ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಒಬ್ಬರನ್ನು ಬಂಧಿಸಿದ್ದಾರೆ. ಇದಲ್ಲದೆ, ೧.೨೬೦ ಲೀಟರ್ ಮದ್ಯವನ್ನು ಜಪ್ತು ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಲಿಸಿದ್ದಾರೆ.

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org