SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಐ.ಎ.ಎಸ್, ಐ.ಪಿ.ಎಸ್. ತರಬೇತಿಗಾಗಿ ಅರ್ಜಿ ಆಹ್ವಾನ ಐ.ಎ.ಎಸ್, ಐ.ಪಿ.ಎಸ್. ತರಬೇತಿಗಾಗಿ ಅರ್ಜಿ ಆಹ್ವಾನ ================================================================================ yammar manvi on 28 July, 2010 06:47:00 ಬಳ್ಳಾರಿ: ಅಖಿಲಭಾರತ ನಾಗರಿಕ ಸೇವೆಗಳಿಗೆ (ಐ.ಎ.ಎಸ್./ಐ.ಪಿ.ಎಸ್.) ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪೂರ್ವಭಾವಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಗೆ ಕರ್ನಾಟಕದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಪದವಿ/ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಪೂರ್ವಬಾವಿ ಪರೀಕ್ಷೆಯಲ್ಲಿ ಒಂದುಬಾರಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಪ್ರಾಚಾರ್ಯರು, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಡಾ|| ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ‍್ಸ್ ರಸ್ತೆ, ವಸಂತ ನಗರ, ಬೆಂಗಳೂರು-೫೨ ಇವರಿಂದ ಖುದ್ದಾಗಿ ಅಥವಾ ಜಾಲತಾಣ ಅನ್ನು ಸಂಪರ್ಕಿಸುವುದರ ಮೂಲಕ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ ೩೧ರೊಳಗಾಗಿ ಇದೇ ಕಚೇರಿಯ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.