Home | ದ.ಕ.ಜಿಲ್ಲಾ ವಾರ್ತೆ | ಉಡುಪಿ | ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರ ದುರಸ್ತಿಗೆ ಆಗ್ರಹ: ‘ಶವಯಾತ್ರೆ’ ನಡೆಸಿ ಪ್ರತಿಭಟನೆ

ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರ ದುರಸ್ತಿಗೆ ಆಗ್ರಹ: ‘ಶವಯಾತ್ರೆ’ ನಡೆಸಿ ಪ್ರತಿಭಟನೆ

Font size: Decrease font Enlarge font
image


ಉಡುಪಿ, ಜು.28: ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ದುರಸ್ತಿಗಾಗಿ ಮುಚ್ಚಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಶೀತಲೀಕೃತ ಶವಾಗಾರವನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇಂದು ‘ಶವ ಯಾತ್ರೆ’ ನಡೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿತು.ಸತತ ಮನವಿಗೆ ಸ್ಪಂದನವಿಲ್ಲ: ಸರ್ಜನ್ ಡಾ.ನಾಯಕ್
ಉಡುಪಿ, ಜು.28: ಕಳೆದ ಎರಡು ವರ್ಷಗಳಿಂದ ದುರಸ್ತಿಗಾಗಿ ಕಾಯುತ್ತಿರುವ ಜಿಲ್ಲಾಸ್ಪತ್ರೆಯ ಶೀತಲೀಕೃತ ಶವಾಗಾರವನ್ನು ಸರಿಪಡಿಸುವಂತೆ ಮಾಡಿಕೊಂಡ ಸತತ ಲಿಖಿತ ಮನವಿಗಳಿಗೆ ಇಲಾಖೆ ಸ್ಪಂದಿಸಿಲ್ಲ ಎಂದು ಜಿಲ್ಲಾ ಸರ್ಜನ್ ಡಾ. ದಯಾನಂದ ನಾಯಕ್ ಹೇಳಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು, ವರ್ಷದ ಹಿಂದೆ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕುರಿತು ಮನವಿ ನೀಡಿದಾಗ ಕೂಡಲೇ ದುರಸ್ತಿಗೊಳಿಸುವಂತೆ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಇದರಂತೆ ಇಲಾಖೆಯ ತಾಂತ್ರಿಕ ತಂಡವೊಂದು ಪರಿಶೀಲಿಸಿ ಇಲ್ಲಿರುವ ಎರಡು ಶೀತಲೀಕೃತ ವ್ಯವಸ್ಥೆಯಲ್ಲಿ ಒಂದನ್ನು ದುರಸ್ತಿಗೊಳಿಸಬಹುದಾಗಿದೆ ಎಂದು ಹೇಳಿ, ದುರಸ್ತಿಗೆ ಕೂಡಲೇ ಪ್ರಸ್ತಾಪ ಕಳುಹಿಸುವಂತೆ ಸೂಚಿಸಿತ್ತು ಎಂದು ಅವರು ತಿಳಿಸಿದರು.

ಅವರು ಸೂಚಿಸಿದಂತೆ ಜಿಲ್ಲಾಸ್ಪತ್ರೆಯ ರಕ್ಷಾ ಸಮಿತಿಯಿಂದ 8,000ರೂ. ಬರಿಸುವ ಪ್ರಸ್ತಾಪ ಕಳುಹಿಸಿ ಆರು ತಿಂಗಳು ಕಳೆದಿದೆ. ಬಳಿಕ ಮೂರು ಬಾರಿ ಪತ್ರವನ್ನು ಬರೆದು ನೆನಪಿಸಿದರೂ ಪ್ರಯೋ ಜನವಾಗಿಲ್ಲ ಎಂದು ಡಾ.ನಾಯಕ್ ತಿಳಿಸಿದರು.

ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದ 11 ವರ್ಷಗಳ ಹಿಂದಿನ ಎರಡು ಶೀತಲೀಕೃತ ಯಂತ್ರಗಳಲ್ಲಿ ಕೇವಲ ನಾಲ್ಕು ಶವಗಳನ್ನು ಮಾತ್ರ ಕಾಪಿಡಲು ಸಾಧ್ಯವಿತ್ತು. ಆದರೆ 9 ಶವಗಳನ್ನು ಇಡುವ ಹೊಸ ಶೀತಲೀಕೃತ ಯಂತ್ರಕ್ಕಾಗಿ ಆಸ್ಪತ್ರೆಯ ರಕ್ಷಾ ಸಮಿತಿ ಟೆಂಡರ್‌ನ್ನು ಒಂದು ವರ್ಷದ ಹಿಂದೆಯೇ ಆರೋಗ್ಯ ಇಲಾಖೆಗೆ ಕಳುಹಿಸಿತ್ತು. ಆದರೆ ಇದಕ್ಕೆ ಇನ್ನೂ ಮಂಜೂರಾತಿ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದ ಡಾ.ದಯಾನಂದ ನಾಯಕ್ ಮಾಹಿತಿ ನೀಡಿದರು.
 ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯ ಹಾಗೂ ಶಾಸಕ ಕೆ.ರಘುಪತಿ ಭಟ್‌ಗೆ ಈ ಬಗ್ಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಡಾ.ನಾಯಕ್ ತಿಳಿಸಿದರು.

ಶವಾಗಾರಕ್ಕೆ ಬದಲಿ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು, ಬಡ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಕೂಡಲೇ ಸರಿಪಡಿಸಬೇಕೆಂದು ಸಂಬಂ ಧಿತರಿಗೆ ಈ ಹಿಂದೆ ಹಲವು ಮನವಿ ಕಳುಹಿಸಲಾಗಿದ್ದು, ಮನವಿಗೆ ಯಾರೂ ಸ್ಪಂದಿಸಿಲ್ಲ ಎಂದು ಸಮಿತಿ ಆರೋಪಿಸಿದೆ. ಶವಗಳನ್ನು ಮಣಿಪಾಲ ಕೆಎಂಸಿ ಅಥವಾ ಇತರ ಖಾಸಗಿ ಆಸ್ಪತ್ರೆಯಲ್ಲಿಡಲು ಸಾವಿರಾರು ರೂ.ಗಳನ್ನು ವ್ಯಯಿಸಬೇಕಾದ ಅನಿವಾರ್ಯತೆ ಇದೆ ಎಂದು ಸಮಿತಿ ಜಿಲ್ಲಾಧಿಕಾರಿ ಪಿ. ಹೇಮಲತಾ ಹಾಗೂ ಜಿಲ್ಲಾ ಸರ್ಜನ್ ಡಾ. ದಯಾನಂದ ನಾಯಕ್‌ರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಶೀತಲೀಕೃತ ಶವಾಗಾರವನ್ನು ಕೂಡಲೇ ದುರಸ್ತಿ ಗೊಳಿಸದಿದ್ದರೆ ಆ.15 ರಂದು ಸಾರ್ವಜನಿಕರನ್ನು ಸೇರಿಸಿಕೊಂಡು ಅಜ್ಜರಕಾಡು ಮೈದಾನದಲ್ಲಿ ನಡೆಯುವ ಸ್ವಾತಂತ್ರೋತ್ಸವ ಪೆರೇಡಿನ ಸಂದರ್ಭ ದಲ್ಲಿ ಶವದ ಮೆರವಣಿಗೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯ ಮೊದಲು ತಾಲೂಕು ಕಚೇರಿಯಿಂದ ಜಿಲ್ಲಾಸ್ಪ ತ್ರೆಯ ಶವಾಗಾರದವರೆಗೆ ‘ಶವದ ಅಣಕು ಯಾತ್ರೆ’ಯನ್ನು ನಡೆಸಲಾಯಿತು.

ಕೃಪೆ:ವಾರ್ತಾಭಾರತಿ

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org