SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಮಾರ್ನಮಿಕಟ್ಟೆ: ಹಳಿ ತಪ್ಪಿದ ಗೂಡ್ಸ್ ರೈಲು ಮಾರ್ನಮಿಕಟ್ಟೆ: ಹಳಿ ತಪ್ಪಿದ ಗೂಡ್ಸ್ ರೈಲು ================================================================================ yammar manvi on 28 July, 2010 07:06:00 ಮಂಗಳೂರು, ಜು.28: ಮಾರ್ನಮಿಕಟ್ಟೆ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಪರಿಣಾಮ ಇಂದು ಬೆಳಗ್ಗೆ ಕೆಲ ಕಾಲ ರೈಲು ಸಂಚಾರ ಅಸ್ತವ್ಯಸ್ಥಗೊಂಡಿತು. ಆಂಧ್ರ ಪ್ರದೇಶದಿಂದ ಮಂಗಳೂರಿಗೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಗೂಡ್ಸ್ ರೈಲು ಮಾರ್ನಮಿಕಟ್ಟೆ ಬಳಿ ಹಳಿ ತಪ್ಪಿದೆ. ಇದರಿಂದ ಎರಡು ಬೋಗಿಗಳಿಗೆ ಹಾನಿಗೀಡಾಗಿವೆ. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿಗಳು ಹಳಿ ತಪ್ಪಿ ಹಾನಿಗೊಳಗಾಗಿದ್ದ ಗೂಡ್ಸ್ ರೈಲಿನ ಬೋಗಿಗಳನ್ನು ತೆರವು ಗೊಳಿಸಿದರು. ಈ ಅವಘಡದಿಂದ ಪ್ರಯಾಣಿಕ ರೈಲು ಸಂಚಾರ ವ್ಯವಸ್ಥೆಯಲ್ಲಿ ಯಾವುದೆ ವ್ಯತ್ಯಯ ಉಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.