ಕಾಸರಗೋಡು: ಬ್ರೌನ್‌ಶುಗರ್ ಮಾರಾಟಕ್ಕೆ ಯತ್ನ ಪ್ರಕರಣ: ಇನ್ನೋರ್ವ ಆರೋಪಿಯ ಸೆರೆ
ಕಾಸರಗೋಡು: ಸುಮಾರು 1 ಕೋ.ರೂ. ವೌಲ್ಯದ ಬ್ರೌನ್ ಶುಗರ್ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತನನ್ನು ಕನಕಪುರದ ರಾಜಾ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಡಿಸಿಐಬಿ ಪೊಲೀಸರು ಪುತ್ತೂರು ತಾಲೂಕಿನ ಕಾವು ಎಂಬಲ್ಲಿಂದ ನಾಲ್ವರು ಆರೋಪಿಗಳನ್ನು ರವಿವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದರು ಹಾಗೂ ಅವರಿಂದ 1 ಕೋ.ರೂ. ವೌಲ್ಯದ ಬ್ರೌನ್ ಶುಗರ್, ಖೋಟಾ ನೋಟು ಪತ್ತೆ ಯಂತ್ರ ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು.
ಇವರಿಗೆ ಕನಕಪುರದ ವ್ಯಕ್ತಿಯೋರ್ವ ಬ್ರೌನ್‌ಶುಗರ್ ಸರಬರಾಜು ಮಾಡುತ್ತಿರುವ ಬಗ್ಗೆ ಈ ಸಂದರ್ಭ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜಾ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ತನಿಖೆಯ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ಪೊಲೀಸ್ ಇಲಾಖೆಯಿಂದ ಲಭ್ಯವಾಗುತ್ತಿಲ್ಲ.
Rate this article



del.icio.us
Digg
Comments (0 posted):
Post your comment