Home | ಉ.ಕ.ಜಿಲ್ಲಾ ವಾರ್ತೆ | ದಾಂಡೇಲಿ | ಸುಳ್ಯ: ಸೇವಾ ನಿಯಮಾವಳಿ ತರಬೇತಿ

ಸುಳ್ಯ: ಸೇವಾ ನಿಯಮಾವಳಿ ತರಬೇತಿ

Font size: Decrease font Enlarge font

ಸುಳ್ಯ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘ ಸುಳ್ಯ ಇದರ ವತಿಯಿಂದ ಸರಕಾರಿ ಸೇವಾ ನಿಯಮಾವಳಿಗಳ ಕಾರ್ಯಾಗಾರವು  ಗುರುಭವನ ಸೇವಾ ಸದನದಲ್ಲಿ ನಡೆಯಿತು.

ಕಾರ್ಯಾಗಾರವನ್ನು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್ ಬಂಟ್ವಾಳ್ ಉದ್ಘಾಟಿಸಿದರು. ಅತಿಥಿಗಳಾಗಿ ಉಪತಹಶೀಲ್ದಾರ್ ಬೆಳ್ಯಪ್ಪ ಗೌಡ, ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳದ ಪತ್ರಾಂಕಿತ ಖಜಾನಾಧಿಕಾರಿ ರಾಮಪ್ರಸಾದ್ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ಯಾಮ ಪ್ರಸಾದ್ ಮಡ್ತಿಲ ವಹಿಸಿದರು.

ಸಂಪನ್ಮೂಲ ವ್ಯಕ್ತಿ ರಾಮಪ್ರಸಾದರನ್ನು ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಸನ್ಮಾನಿಸಿದರು. ವಿಜಯಕುಮಾರಿ ಸ್ವಾಗತಿಸಿ,  ಮಲ್ಲಿಕಾ ವಂದಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ಕೆ., ತೀರ್ಥರಾಮ ಎಚ್.ಬಿ. ಸಹಕರಿಸಿದರು.

’ಆಳ್ವಾಸ್ ನುಡಿಸಿರಿ’ ಸುಳ್ಯ ಘಟಕ ರಚನೆ

ಸುಳ್ಯ: ೨೦೧೩ರಲ್ಲಿ ನಡೆಯಲಿರುವ ೧೦ ನೇ ’ಆಳ್ವಾಸ್ ನುಡಿಸಿರಿ’ ಕಾರ್ಯಕ್ರಮ ವನ್ನು ಆಳ್ವಾಸ್ ವಿಶ್ವ ನುಡಿಸಿರಿಯನ್ನಾಗಿ ರೂಪಿಸುವ ಹಿನ್ನಲೆಯಲ್ಲಿ ಸುಳ್ಯದಲ್ಲಿ ’ಆಳ್ವಾಸ್ ನುಡಿಸಿರಿ’ ಸುಳ್ಯ ತಾಲೂಕು ಘಟಕವನ್ನು ರಚಿಸಲಾಗಿದೆ.

ಗೌರವಾಧ್ಯಕ್ಷರಾಗಿ  ಡಾ| ಕುರುಂಜಿ ವೆಂಕಟ್ರಮಣ ಗೌಡ ಹಾಗೂ ಶಾಸಕ ಎಸ್.ಅಂಗಾರ, ಅಧ್ಯಕ್ಷರಾಗಿ ಜಾಕೆ ಮಾಧವ ಗೌಡ, ಕಾರ್ಯಾಧ್ಯಕ್ಷರಾಗಿ ಪಿ.ಬಿ.ದಿವಾಕರ ರೈ, ಕಾರ್ಯದರ್ಶಿ ಯಾಗಿ ಕೆ.ಆರ್.ಗಂಗಾಧರ್, ಖಜಾಂಜಿಯಾಗಿ ಪಿ.ಬಿ.ಸುಧಾಕರ ರೈ ಆಯ್ಕೆಯಾದರು.

ಉಪಾಧ್ಯಕ್ಷರಾಗಿ  ಮೀನಾಕ್ಷಿ ಗೌಡ, ಎನ್.ಎಸ್.ದೇವಿಪ್ರಸಾದ್, ಜಯಪ್ರಕಾಶ್ ರೈ, ಭರತ್ ಮುಂಡೋಡಿ, ಡಾ| ಪ್ರಭಾಕರ ಶಿಶಿಲ, ಡಾ| ಚಂದ್ರಶೇಖರ ದಾಮ್ಲೆ, ಕೆ.ವಿ.ದಾಮೋದರ ಗೌಡ, ಡಾ| ಹರಪ್ರಸಾದ್, ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್, ಡಾ|ಜ್ಞಾನೇಶ್, ಪ್ರಕಾಶ್ ಹೆಗ್ಡೆ, ಜತೆಕಾರ್ಯದರ್ಶಿಗಳಾಗಿ ಡಾ| ಸುಂದರ ಕೇನಾಜೆ, ದುರ್ಗಾಕುಮಾರ್ ನಾಯರ್‌ಕೆರೆ, ಡಾ.ಪೂವಪ್ಪ ಕಣಿಯೂರು, ಗೋಕುಲ್‌ದಾಸ್, ಕೆ.ಟಿ.ವಿಶ್ವನಾಥ್, ಬೂಡು ರಾಧಾಕೃಷ್ಣ ರೈ, ಭವಾನಿಶಂಕರ ಅಡ್ತಲೆ, ಎಂ. ಎಸ್.ಜಯಪ್ರಕಾಶ್, ದಿನೇಶ್ ಮಡಪ್ಪಾಡಿ, ಶಶಿಧರ ಪಳಂಗಾಯ, ಸುರೇಶ್ ಕಣೆಮರಡ್ಕ, ಡಾ| ಕೇಶವ ಪಿ.ಕೆ., ಪ್ರದೀಪ್ ಕುಮಾರ್ ರೈ ಪನ್ನೆ, ಕೇಶವ ಪ್ರಸಾದ್ ತೊಡಿಕಾನ, ಚಂದ್ರಶೇಖರ ಮಂಡೆಕೋಲು, ಗಣೇಶ್ ಪ್ರಸಾದ್ ನಾಯರ್, ಅಚ್ಚುತ ಅಟ್ಲೂರು, ಲೋಕೇಶ್ ಪೆರ್ಲಂಪಾಡಿ ಆಯ್ಕೆಯಾದರು.

ಹಿರಿಯ ಮಾರ್ಗದರ್ಶಕರಾಗಿ ಕೋಡಿ ಕುಶಾಲಪ್ಪ ಗೌಡ, ಟಿ.ಜಿ.ಮುಡೂರು, ಸುಬ್ರಾಯ ಚೊಕ್ಕಾಡಿ, ಜಿ.ಎಸ್. ಉಬರಡ್ಕ, ಕುತ್ಯಾಳ ನಾಗಪ್ಪ ಗೌಡ, ಶೀಲಾವತಿ ಕೊಳಂಬೆ, ಜಯಮ್ಮ ಚೆಟ್ಟಿಮಾಡ, ರಾಮಚಂದ್ರ ದೇವ, ಸುಮಾ ಸುಬ್ಬರಾವ್, ವಿಶ್ವವಿನೋದ ಬನಾರಿ, ಆನೆಕಾರ ಗಣಪಯ್ಯ, ಜವರೇಗೌಡ, ಎಸ್. ಎಂ.ಬಾಪೂ ಸಾಹೇಬ್, ಪಡ್ಡಂಬೈಲ್ ವೆಂಕಟ್ರಮಣ ಗೌಡ,  ಕಮಲಾಕ್ಷಿ ವಿ ಶೆಟ್ಟಿ, ಜನಾರ್ದನ ಎರ್ಪಕಟ್ಟೆ, ಜಯಂತ್ ಕೆದಿಲಾಯ, ಡಾ| ಕೆ.ಎನ್. ಶೆಟ್ಟಿ, ಕೃಷ್ಣ ನಾವಡ ಆಯ್ಕೆಯಾದರು.
ಆಳ್ವಾಸ್ ನುಡಿಸಿರಿ : ಸುಳ್ಯದಲ್ಲಿ ಸಮಾಲೋಚನಾ ಸಭೆ
ಸಜ್ಜನ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ : ಡಾ| ಆಳ್ವ

ಸುಳ್ಯ: ಆಳ್ವಾಸ್ ನುಡಿಸಿರಿ ಎಂದರೆ ಸಜ್ಜನ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ. ೨೦೧೩ರಲ್ಲಿ ನಡೆಯುವ ವಿಶ್ವ ನುಡಿಸಿರಿಯಲ್ಲಿ ವಿಶ್ವದಾದ್ಯಂತ ಇರುವ ಕನ್ನಡದ ಸಜ್ಜನ ಮನಸುಗಳನ್ನು ಒಂದುಗೂಡಿಸುವ ಕೆಲಸ ಆಗಲಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮತ್ತು ನುಡಿಸಿರಿಯ ರೂವಾರಿ ಡಾ| ಎಂ. ಮೋಹನ್ ಆಳ್ವ ಹೇಳಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ೮ನೇ ಆಳ್ವಾಸ್ ನುಡಿಸಿರಿ ಮತ್ತು ೨೦೧೩ರಲ್ಲಿ ನಡೆಯುವ ಹತ್ತನೇ ವರ್ಷದ ವಿಶ್ವ ನುಡಿಸಿರಿ ಸಮ್ಮೇಳನದ ಹಿನ್ನಲೆಯಲ್ಲಿ  ಸುಳ್ಯ ಶಿವಕೃಪಾ ಕಲಾಮಂದಿರ ದಲ್ಲಿ ನಡೆದ  ತಾಲೂಕು ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಸಮಾನ ಮನಸ್ಕರು, ಸಜ್ಜನರು ಎಲ್ಲಾ ಕಡೆಯೂ ಇದ್ದಾರೆ. ಕನ್ನಡದ ವಿಷಯದಲಿ, ಕನ್ನಡದ ಕೆಲಸದಲ್ಲಿ ಎಲ್ಲರಿಗೂ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ವಿವಿಧ ಪರಿಕಲ್ಪನೆಗಳನ್ನು ಇಟ್ಟುಕೊಂಡು ನುಡಿ ಸಿರಿ ಸಂಘಟಿತವಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ಠರಾವು ಮಂಡಿಸಿ ಇಂಥ ಗುರಿಯೆಡೆಗೆ ಸಾಗಬೇಕು ಎಂದು ಡಾ| ಆಳ್ವ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು  ಹಿರಿಯ ಸಾಹಿತಿ ಡಾ| ಕೋಡಿ ಕುಶಾಲಪ್ಪ ಗೌಡರು ವಹಿಸಿದ್ದರು.ಸುಳ್ಯ ಶಾಸಕ ಎಸ್.ಅಂಗಾರ, ಸುಳ್ಯ ತಾಲೂಕು ಕ.ಸಾ.ಪ. ಅಧ್ಯಕ್ಷೆ  ಎಂ.ಮೀನಾಕ್ಷಿ ಗೌಡ, ಸಾಹಿತಿಗಳಾದ ಡಾ| ಪ್ರಭಾಕರ ಶಿಶಿಲ, ಡಾ| ಚಂದ್ರಶೇಖರ ದಾಮ್ಲೆ, ಲೇಖಕ ಡಾ| ನರೇಂದ್ರ ರೈ ದೇರ್ಲ, ರಾಜಕೀಯ ಧುರೀಣ ಭರತ್ ಮುಂಡೋಡಿ ಮಾತನಾಡಿ ಸಲಹೆ ಸೂಚನೆಗಳನ್ನಿತ್ತರು.

ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಸ್ವಾಗತಿಸಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ  ಮೌಲ್ಯ ಜೀವನ್  ವಂದಿಸಿದರು. ಉಪನ್ಯಾಸಕ ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org