Home | ಉ.ಕ.ಜಿಲ್ಲಾ ವಾರ್ತೆ | ಭಟ್ಕಳ | ಭಟ್ಕಳ: ಅಬಕಾರಿ ಹಾಗೂ ರೇಲ್ವೆ ಪೊಲೀಸರಿಂದ ೬೨ಸಾವಿರ ಮೌಲ್ಯದ ಅಕ್ರಮ ಮದ್ಯ ವಶ

ಭಟ್ಕಳ: ಅಬಕಾರಿ ಹಾಗೂ ರೇಲ್ವೆ ಪೊಲೀಸರಿಂದ ೬೨ಸಾವಿರ ಮೌಲ್ಯದ ಅಕ್ರಮ ಮದ್ಯ ವಶ

Font size: Decrease font Enlarge font
image

*ಭಟ್ಕಳದಲ್ಲಿ ಹೆಚ್ಚುತ್ತಿರುವ ಗೋವಾ ಮದ್ಯದ ಹಾವಾಳಿ

 
 
ಭಟ್ಕಳ: ಇತ್ತಿಚಿನ ದಿನಗಳಲ್ಲಿ ಭಟ್ಕಳ ತಾಲೂಕಿನಾದ್ಯಂತ ಗೋವಾ ಮದ್ಯ ಲೀಟರುಗಟ್ಟಲೆ ಹರಿದು ಬರುತ್ತಿದ್ದು ಅಬಕಾರಿ ಪೊಲೀಸರು ಪ್ರತಿ ಬಾರಿ ದಾಳಿ ಮಾಡಿ ಲೀಟರುಗಟ್ಟಲೆ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಆದರೆ ದುರಾದೃಷ್ಟವಶಾತ್ ಆರೋಪಿಗಳು ಮಾತ್ರ ಪೊಲೀಸರಿಗೆ ಸಿಗದೆ ಪರಾರಿಯಾಗುತ್ತಾರೆ. 
 
 
ಮಂಗಳವಾರವೂ ಮುರುಡೇಶ್ವರ ರೇಲ್ವೆ ನಿಲ್ದಾಣದ ಬಳಿ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿದ ಅಬಕಾರಿ ಪೊಲೀಸರು ಸುಮಾರು ೬೭೨೦೦ ರೂ ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಮತ್ತೆ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ. 
 
ಗೋವಾದಿಂದ ಭಟ್ಕಳಕ್ಕೆ ಬರುವ ರೈಲಿನಲ್ಲಿ ಅಲ್ಲಿಂದ ಕಾಣದ ಕೈಗಳು ಮದ್ಯದ ಬಾಟಲಿಗಳನ್ನು ಕಳುಹಿಸುತ್ತಾರೆ ಭಟ್ಕಳದ ಕಾಣದ ಕೈಗಳು ಅದನ್ನು ಪಡೆದುಕೊಳ್ಳುತ್ತಾರೆ. ಇದು ದಿನನಿತ್ಯವೋ ನಡೆಯುತ್ತಲೆ ಇದೆ ಆದರೆ ಕೆಲವೊಮ್ಮೆ ಮಾತ್ರ ಪೊಲೀಸರಿಗೆ ಮಾಹಿತಿ ಕಳುಹಿಸುತ್ತಾರೆ. ಆ ಸಂದರ್ಭದಲ್ಲಿ ಕೆಲವೊಂದಿಷ್ಟು ಮದ್ಯದ ಬಾಟಲಿಗಳನ್ನು ವಶಪಡಿಕೊಂಡು ಪೊಲೀಸರು ತಾವು ದಾಳಿ ಮಾಡಿ ಮದ್ಯವನ್ನು ವಶಪಡಿಸಿಕೊಂಡಿದ್ದಾಗಿ ಹೇಳಿಕೊಳ್ಳುತ್ತಾರೆ. ಆದರೆ ಭಟ್ಕಳಕ್ಕೆ ಗೋವಾ ಕಡೆಯಿಂದ ಮದ್ಯ ಬರುವುದು ಮಾತ್ರ ನಿಲ್ಲುವುದಿಲ್ಲ. ಇಂತಹ ಅಕ್ರಮ ಚಟುವಟಿಕೆಗಳ ಹಿಂದೆ ಹೊಡ್ಡ ಗ್ಯಾಂಗ್ ಇರುವ ಶಂಕೆ ವ್ಯಕ್ತವಾಗಿದ್ದು ಆ  ಗ್ಯಾಂಗಿನ ಬುಡಕ್ಕೆ ಕೈ ಹಾಕಬೇಕಾದ ಅನಿವಾರ್ಯತೆ ಇದೆ ಎಂದು ಮದ್ಯ ವಿರೋಧಿಗಳು ಹೇಳುತ್ತಿದ್ದಾರೆ. 
 
ಒಂದೆಡೆ ಮದ್ಯಪಾನ ವಿರೋಧಿ ಸಮಿತಿಗಳು, ಧರ್ಮಸ್ಥಳ ಗ್ರಾಮಾಭಿವೃದ್ದಿ ನವಜೀವನ ಸಮಿತಿ ಜನರನ್ನು ಮದ್ಯಪಾನದಿಂದ ಮುಕ್ತಗೊಳಿಸಿ ಅವರಿಗೊಂದು ನವಜೀವನ ನೀಡುವಲ್ಲಿ ಕಾರ್ಯಪ್ರವೃತ್ತರಾಗಿದ್ದು ಮತ್ತೊಂದೆಡೆ ಗೋವಾ ರಾಜ್ಯದಿಂದ ಮದ್ಯವನ್ನು ತಂದು ಇಲ್ಲಿನ ಜನರ ಜೀವನ ಹಾಳು ಮಾಡುವ   ಗುಂಪೊಂದು ಕಾರ್ಯಪ್ರವೃತ್ತಗೊಂಡಿರುವುದು  ಮನೆಮುರಕ ಕಾರ್ಯಗಿಳಿದವರನ್ನು ಹಿಡಿದು ತಕ್ಕ ಶಾಸ್ತಿ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. 
 
ಈ ನಿಟ್ಟಿನಲ್ಲಿ ಅಬಕಾರಿ ಪೊಲೀಸರು, ಜಿಲ್ಲಾಡಳಿತವು ಸಹ ಎಚ್ಚೆತ್ತುಕೊಂಡು ಇಂತಹ ಗ್ಯಾಂಗಿನ ಅಕ್ರಮ ಕಾರ್ಯಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Tags
No tags for this article
Rate this article
0
Powered by SahilOnline.org