Home | ಉ.ಕ.ಜಿಲ್ಲಾ ವಾರ್ತೆ | ಭಟ್ಕಳ | ಭಟ್ಕಳ:ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಷನ್(ಐಟಾ) ಪದಾಧಿಕಾರಿಗಳ ನೇಮಕ

ಭಟ್ಕಳ:ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಷನ್(ಐಟಾ) ಪದಾಧಿಕಾರಿಗಳ ನೇಮಕ

Font size: Decrease font Enlarge font
image

ಅಧ್ಯಕ್ಷರಾಗಿ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಸಹಾಯಕ ಶಿಕ್ಷಕ ಮುಹಮ್ಮದ್ ರಝಾ ಮಾನ್ವಿ ಕಾರ್ಯದರ್ಶಿಯಾಗಿ ಅಂಜುಮನ್ ಮಹಾವಿದ್ಯಾಲಯದ ಅರಬಿ ವಿಭಾಗದ ಮುಖ್ಯಸ್ಥ ಪ್ರೋ.ಅಬ್ದುಲ್ ಕಾದಿರ್ ಕುರೈಶಿ ಆಯ್ಕೆಯಾದರು.

ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಷನ್ (ಐಟಾ) ಭಟ್ಕಳ ಘಟಕದ ಪದಾಧಿಕಾರಿಗಳ ನೇಮಕ ರಾಜ್ಯ ಸಲಹಾ ಸಮಿತಿ ಸದಸ್ಯ ಆಮಿರ್ ಹುಸೇನ್ ಉಮ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. 
 
ಭಟ್ಕಳ ಶಾಖೆಯ ಅಧ್ಯಕ್ಷರಾಗಿ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಸಹಾಯಕ ಶಿಕ್ಷಕ ಮುಹಮ್ಮದ್ ರಝಾ ಮಾನ್ವಿ ಕಾರ್ಯದರ್ಶಿಯಾಗಿ ಅಂಜುಮನ್ ಮಹಾವಿದ್ಯಾಲಯದ ಅರಬಿ ವಿಭಾಗದ ಮುಖ್ಯಸ್ಥ ಪ್ರೋ.ಅಬ್ದುಲ್ ಕಾದಿರ್ ಕುರೈಶಿ ಆಯ್ಕೆಯಾದರು. 
 
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಂಜುಮನ್ ಪದವಿಪೂರ್ವ ಕಾಲೇಜಿನ ಉರ್ದು ಉಪನ್ಯಾಸಕ ಅಬ್ದುಲ್ ರವೂಫ್ ಸವಣೂರು, ಅಂಗ್ಲ ಉಪನ್ಯಾಸಕ ಪ್ರೋ.ಎ.ಆರ್.ಖಾನ್, ಮೌಲಾನ ಮುಹಮ್ಮದ್ ಜಾಫರ್ ಫಖ್ಖಿಭಾವ್, ಶಮ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹುಸೇನ್ ಅನ್ಸಾರ್ ಹಾಗೂ ಸೈಯ್ಯದ್ ಕುತುಬ್ ಬರ್ಮಾವರ್ ಆಯ್ಕೆಗೊಂಡಿದ್ದಾರೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಷನ್ ಭಟ್ಕಳ ಘಟಕವು ಪ್ರಕಣೆಯಲ್ಲಿ ತಿಳಿಸಿದೆ.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org