Home | ರಾಷ್ಟ್ರೀಯ ವಾರ್ತೆ | ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’

ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’

Font size: Decrease font Enlarge font

ಕಾಸರಗೋಡು, ಜು.28: ಗಡಿನಾಡ ಧ್ವನಿ ಪತ್ರಿಕೆ ಪಾಣಾಜೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ ಆ.7ರಂದು ಜರಗುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರಿಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ- 2010’ನ್ನು ನೀಡಿ ಗೌರವಿಸಲಾಗುವುದು.


ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರಾದ ಗಡಿನಾಡ ಕನ್ನಡಿಗರು ಅನುಭವಿಸು ತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಹಾಗೂ ಕಾರ್ಯೋನ್ಮುಖವಾಗಲು ಸರಕಾರದ ಗಮನ ಸೆಳೆಯುವ ಉದ್ದೇಶದೊಂದಿಗೆ ಕಾಸರಗೋಡಿನ ಮುನ್ಸಿಪಾಲ್ ಕಾನ್ಪರೆನ್ಸ್ ಹಾಲ್‌ನಲ್ಲಿ ಆ.7ರಂದು ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಕಿಂಞಿಣ್ಣ ರೈಯವರಿಗೆ ‘ಕರ್ನಾಟಕ ಗಡಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಥಮ ಕರ್ನಾಟಕ ಗಡಿನಾಡ ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಅಬೂಬಕರ್ ಆರ್ಲಪದವು, ಅಧ್ಯಕ್ಷ ಶಿವರಾಮ ಕಾಸರಗೋಡು ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org